 ಕಾರ್ಬೆಟ್, ರಿಚರ್ಡ್ 

 1582-1635. ಆಂಗ್ಲಕವಿ ಮತ್ತು ಪಾದ್ರಿಮಾಲಿಯೊಬ್ಬನ ಮಗ. ವಿದ್ಯಾಭ್ಯಾಸ ವೆಸ್ಟ್ ಮಿನಿಸ್ಟರ್ ಶಾಲೆ ಮತು ಆಕ್ಸ್‍ಫರ್ಡ್‍ಗಳಲ್ಲಿ. ತನ್ನ 37ನೆಯ ವಯಸ್ಸಿನಲ್ಲಿ ಚರ್ಚಿನ ಡೀನ್ ಆಗಿ ನೇಮಕಗೊಂಡ. ಅನಂತರ ನಾರ್‍ವಿಚ್ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ಬಿಷಪ್ ಪದವಿಗೇರಿದ. 1647ರಲ್ಲಿ ಸರ್ಟನ್ ಎಲಿಗೆಂಟ್ ಪೊಯಮ್ಸ್ ಎಂಬ ಕವನ ಸಂಕಲನವೊಂದನ್ನು ಪ್ರಕಟಿಸಿದ. ಈ ಕವನಗಳು ಈತನ ಉಲ್ಲಾಸಕರ ಗುಣವನ್ನು ಪ್ರತಿಬಿಂಬಿಸುತ್ತವೆ.   

 (ಎನ್.ಎಸ್.ಎಲ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ